My Photo

My Photo
My Family

Saturday, November 20, 2010

ನಾನು ಓದಿದ ಪುಸ್ತಕ

RETIRE RICH INVEST Rs. 40 A DAY - PV Subramanyam
Publisher : CNBC TV18   /   MRP Rs. 399

          ನಿವೃತ್ತಿ, ಜೀವನದ  ಅವಿಭಾಜ್ಯ ಅಂಗ. ವೃತ್ತಿ ಜೀವನದ ಪ್ರಾರಂಭಿಕ ಹಂತದಲ್ಲಿ ನಿವೃತ್ತಿ  ಬಗ್ಗೆ ಯೋಚಿಸುವುದನ್ನು ನಾವು ಬೆರಗುಗಣ್ಣಿನಿಂದ  ನೋಡುವ   ಪರಿಪಾಠ  ಸಾಮಾನ್ಯ.  ನಾವೆಲ್ಲ  ಕೈ ನಡೆಯುವಾಗ   ಗೊತ್ತುಗುರಿಯಿಲ್ಲದೇ  ಮನೆ, ನಿವೇಶನ, ಜೀವವಿಮೆ, ಬಂಗಾರ, ಕಾರು, ಷೇರು ಅಂತ ಖರೀದಿಸುವುದು  ಅರಿತ ಸಂಗತಿ. ಆದರೆ  ನಿವೃತ್ತಿಯ  ನಂತರದ ಪರಿಸ್ಥಿತಿ, ಯಾವ ಮಟ್ಟದ  ಜೀವನ  ನಡೆಸಬೇಕು, ಆಗಿನ ಬಾಧ್ಯತೆಗಳು  ಏನೇನು  ಎನ್ನುವುದರತ್ತ  ಗಮನಹರಿಸಿದರೆ,  ನಿವೃತ್ತಿಗಾಗಿ  ಹಣಕಾಸು ಯೋಜನೆಯ  ಮಹತ್ವ  ಅರಿವಾಗುತ್ತದೆ.  ಈ  ಪುಸ್ತಕದಲ್ಲಿ  ಲೇಖಕರಾದ ಪಿ.ವಿ.ಸುಬ್ರಮಣ್ಯಂ ಅವರು ಪ್ರತಿದಿನ ಕೇವಲ ರೂ.40 ವಿನಿಯೋಗಿಸಿ  ದೀರ್ಘಾವಧಿಯಲ್ಲಿ ಹೇಗೆ  ಕೋಟ್ಯಾಧೀಶರಾಗಬಹುದು  ಎಂಬುದನ್ನು  ಅತ್ಯಂತ ಸರಳ  ಭಾಷೆಯಲ್ಲಿ ಪ್ರಸ್ತುತಪಡಿಸಿದ್ದಾರೆ. ಈ ವಿಷಯವಲ್ಲದೇ ವೈಯಕ್ತಿಕ ಹಣಕಾಸಿನ ಬಗ್ಗೆ ಹೆಚ್ಚಿನ ಅರಿವು ಪಡೆಯಲು ಲೇಖಕರ  www.subramoney.com ಬ್ಲಾಗನ್ನು ಅವಲೋಕಿಸಬಹುದಾಗಿದೆ.


Disclaimer: While I have made efforts to ensure the accuracy of  content (consisting of articles and information), neither this blog nor the author shall be held responsible for any losses/ incidents suffered by people accessing, using or is supplied with the content

1 comment:

  1. ಹೇಗಿದ್ದೀರಿ ದೇಸಾಯಿ ಸರ್‌?

    ನನ್ನ ಕಷ್ಟದ ವೃತ್ತಿ ಜೀವನದಲ್ಲಿ ಹತ್ತಿರವಾಗಿದ್ದವರು ನೀವು. ಏನೋ ಬದಲಾವಣೆ ಮಾಡಬೇಕೆಂದು ಹಂಬಲಿಸುವ, ಆದರೆ, ಮಾಡಲಾಗದ ಅಸಹಾಯಕತೆಯಿಂದ ಕೊರಗುತ್ತಿದ್ದಿರಿ. ಈಗ ಹೇಗಿದ್ದೀರಿ? ನೀವು ಕೆಲಸ ಮಾಡಿದ ಸ್ಥಳಗಳ ನೆನಪು ನಿಮ್ಮನ್ನು ಕಾಡುತ್ತಿರಬೇಕಲ್ಲವೆ?

    ನನಗೂ ಹಾಗೇ. ನಾನು ಓಡಾಡಿದ, ವಾಸಿಸಿದ ಸ್ಥಳಗಳು ನನ್ನ ನೆನಪಿನ ಶಾಶ್ವತ ಅಂಗಗಳಾಗಬಿಟ್ಟಿವೆ. ನನ್ನ ನಿತ್ಯದ ನೆನಪುಗಳೊಂದಿಗೆ ಹಾಸುಹೊಕ್ಕಾಗಿವೆ. ಸದ್ಯ ಬಿಜಾಪುರದಲ್ಲಿದ್ದೀರಿ ಎಂಬುದು ನಿಮ್ಮ ಪ್ರೊಫೈಲ್‌ ನೋಡಿದಾಗ ಗೊತ್ತಾಯಿತು. ನೀವಿನ್ನೂ ಕುಕನೂರಿನಲ್ಲೇ ಇದ್ದೀರಿ ಅಂತ ಅಂದುಕೊಂಡಿದ್ದೆ.

    ಇರಲಿ ಬಿಡಿ. ಬದುಕು ಕರೆದಲ್ಲಿಗೆ ಹೋಗುವುದು ನಮ್ಮ ಕರ್ತವ್ಯ ತಾನೆ? ಅಂದ್ಹಾಗೆ ನನ್ನ ಬ್ಲಾಗ್‌ ಅದೆಲ್ಲಿ ಪತ್ತೆ ಮಾಡಿದಿರಿ? ಏನನ್ನಿಸಿತು ಓದಿ? ಬರೆಯುತ್ತೀರಿ ಅಲ್ಲವೆ?

    ನಿಮ್ಮ ಬ್ಲಾಗ್‌ ಓದುತ್ತ ಪ್ರತಿಕ್ರಿಯಿಸುತ್ತ ಸಾಗುತ್ತೇನೆ. ಸದ್ಯ ಸಮಯ ಟಿವಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಉಳಿದಂತೆ ಕ್ಷೇಮ. ಇಬ್ಬರು ಮಕ್ಕಳು. ದೊಡ್ಡವಳ ಬಗ್ಗೆ ಇದೇ ಬ್ಲಾಗ್‌ನಲ್ಲಿ ಹಲವಾರು ಸಾರಿ ಬರೆದುಕೊಂಡಿದ್ದೇನೆ.

    ಬದುಕು ನಿಜಕ್ಕೂ ಆಸಕ್ತಿದಾಯ. ಎಲ್ಲ ನೋವುಗಳಾಚೆಯೂ ನಲಿವು ಹುಟ್ಟಿಸುವಂಥದು.

    ಇದೊಂದು ನಿಲ್ಲದ ಪಯಣ. ತೀರದ ದಾಹ.

    ನನ್ನ ವೈಯಕ್ತಿಕ ಮೇಲ್‌ ವಿಳಾಸ: chamarajs@gmail.com

    ಬಿಡುವಾದಾಗ ನನ್ನ ಬ್ಲಾಗ್‌ಗೆ ಬರುತ್ತಾ ಇರಿ. ನಿಮಗೆ ಏನಾದರೂ ಒಂದು ಸಿಗುತ್ತ ಹೋಗುತ್ತದೆ.

    ಮತ್ತೆ ಸಿಕ್ತೀನಿ.

    ReplyDelete