My Photo

My Photo
My Family

Saturday, November 20, 2010

ನಾನು ಓದಿದ ಪುಸ್ತಕ

RETIRE RICH INVEST Rs. 40 A DAY - PV Subramanyam
Publisher : CNBC TV18   /   MRP Rs. 399

          ನಿವೃತ್ತಿ, ಜೀವನದ  ಅವಿಭಾಜ್ಯ ಅಂಗ. ವೃತ್ತಿ ಜೀವನದ ಪ್ರಾರಂಭಿಕ ಹಂತದಲ್ಲಿ ನಿವೃತ್ತಿ  ಬಗ್ಗೆ ಯೋಚಿಸುವುದನ್ನು ನಾವು ಬೆರಗುಗಣ್ಣಿನಿಂದ  ನೋಡುವ   ಪರಿಪಾಠ  ಸಾಮಾನ್ಯ.  ನಾವೆಲ್ಲ  ಕೈ ನಡೆಯುವಾಗ   ಗೊತ್ತುಗುರಿಯಿಲ್ಲದೇ  ಮನೆ, ನಿವೇಶನ, ಜೀವವಿಮೆ, ಬಂಗಾರ, ಕಾರು, ಷೇರು ಅಂತ ಖರೀದಿಸುವುದು  ಅರಿತ ಸಂಗತಿ. ಆದರೆ  ನಿವೃತ್ತಿಯ  ನಂತರದ ಪರಿಸ್ಥಿತಿ, ಯಾವ ಮಟ್ಟದ  ಜೀವನ  ನಡೆಸಬೇಕು, ಆಗಿನ ಬಾಧ್ಯತೆಗಳು  ಏನೇನು  ಎನ್ನುವುದರತ್ತ  ಗಮನಹರಿಸಿದರೆ,  ನಿವೃತ್ತಿಗಾಗಿ  ಹಣಕಾಸು ಯೋಜನೆಯ  ಮಹತ್ವ  ಅರಿವಾಗುತ್ತದೆ.  ಈ  ಪುಸ್ತಕದಲ್ಲಿ  ಲೇಖಕರಾದ ಪಿ.ವಿ.ಸುಬ್ರಮಣ್ಯಂ ಅವರು ಪ್ರತಿದಿನ ಕೇವಲ ರೂ.40 ವಿನಿಯೋಗಿಸಿ  ದೀರ್ಘಾವಧಿಯಲ್ಲಿ ಹೇಗೆ  ಕೋಟ್ಯಾಧೀಶರಾಗಬಹುದು  ಎಂಬುದನ್ನು  ಅತ್ಯಂತ ಸರಳ  ಭಾಷೆಯಲ್ಲಿ ಪ್ರಸ್ತುತಪಡಿಸಿದ್ದಾರೆ. ಈ ವಿಷಯವಲ್ಲದೇ ವೈಯಕ್ತಿಕ ಹಣಕಾಸಿನ ಬಗ್ಗೆ ಹೆಚ್ಚಿನ ಅರಿವು ಪಡೆಯಲು ಲೇಖಕರ  www.subramoney.com ಬ್ಲಾಗನ್ನು ಅವಲೋಕಿಸಬಹುದಾಗಿದೆ.


Disclaimer: While I have made efforts to ensure the accuracy of  content (consisting of articles and information), neither this blog nor the author shall be held responsible for any losses/ incidents suffered by people accessing, using or is supplied with the content

ಕವನ

ಬಾಡದ ಹೂ

ಮನೆಯಲ್ಲೊಂದು ಬಾಡದ ಹೂವಿತ್ತು
ಪ್ರೇಯಸಿ ಪ್ರೀತಿಗೆ ಗುಲಾಬಿಯಂತೆ
ಹೆಂಡತಿ ಮುಡಿಗೆ ಮಲ್ಲಿಗೆಯಂತೆ
ದೇವಪೂಜೆಗೆ ದಂಡೆಯಂತೆ
ಭಾವ ಭಕುತಿಗೆ ತಕ್ಕಂತೆ.....


ಇತ್ತೀಚೆಗೆ  ಯಾಕೋ ಬಾಡಿದಂತೆ ಕಂಡಿದೆ
ಭಾವಕ್ಕೆ ತಕ್ಕ ಬಂಧ ಇಲ್ಲ ಯಾಕೆಂದು 
ಯೋಚಿಸೆ ನನ್ನೆದೆಯ ಗೂಡಲ್ಲೇ
ಪ್ರೀತಿಯ ಪಸೆ ಇಲ್ಲ
ಜೀವಸೆಲೆ ಇಲ್ಲ.....

ಹನಿಗವನ

ಸಾಕಾಗಿದೆ

ಸಾಕಾಗಿದೆ ಪ್ರಿಯೆ
ಸಾಲುತ್ತಿಲ್ಲ ಪತ್ರ ಬರೆಯಲು
ಕಾಗದ ಶಬ್ದ ಶಾಯಿ


ಹಿರಿಯರ ಆಕ್ಷೇಪ ಬೇರೆ
ಅವರ ಸ್ವಭಾವ 
ಶುದ್ಧ ಮೊಗಲಾಯಿ


ಸುಲಭವಾಗಲಿ ಸಂವಹನ
ಅದಕ್ಕೇ ಊದಿಸಿಬಿಡೋಣ
ಬೇಗ ಶಹನಾಯಿ

Thursday, November 18, 2010

ಕವನ

ವಾಸ್ತವ


ಪ್ರಿಯೆ.....
ಹಿಂತಿರುಗಿಸುವುದ ಮರೆತೆ ನೀನು
ಕದ್ದ ನನ್ನ ಇದ್ದೊಂದು  ಹೃದಯ !
ನೋಡೀಗ ಮಡದಿಯ ದೂರು
ನಾನಂತೆ  ಹೃದಯ ಹೀನ !


ಕಲಹ ಬೇಡ ಎಂದಾದರೆ
ಬಾ ಭೂತ ಕಾಲಕ್ಕೆ ಜಾರುವ...!
ನಾನಾಗ ಪ್ರಿಯ
ಮತ್ತೆ ನೀ ಪ್ರಿಯತಮೆ !


ಹಿಂತಿರುಗಿಸಿ ಬಿಡುವ ಪರಸ್ಪರರು
ಕದ್ದ  ಹೃದಯಗಳ !? ನಂತರ
ನಡೆಸೋಣ ಹೃದಯವಂತ ಬದುಕು
ಇರಲಿ ಅದಕೆ ಭೂತಕಾಲದ ನೆನಪು !



Wednesday, November 17, 2010

ಹನಿಗವನ

ಆಧುನಿಕ ಗುರು


ಆಧುನಿಕ ಗುರು ಇವರು
ಏನನ್ನೂ ಕಲಿಸರು
ಬಾಯಲ್ಲೋ ಬರೀ
ಹಾಯ್ ಹಲೋಗಳದ್ದೇ ಹಾವಳಿ
ಅದಕ್ಕೇ ಇರಬೇಕು
ಇವರ ಕ್ಲಾಸೆಂದರೆ ಹುಡುಗರದ್ದು
ಕ್ಯಾಂಟೀನ್ ಚಲೋ ಚಳುವಳಿ